ಹರಿವಲ್ಲಿ ಕಂಡೆ ನಿಂತಲ್ಲಿ ಕಂಡೆ
ನಾ ನಿನ್ನ ಮುದ್ದು ಮುಖವ
ಹೂವಲ್ಲು ನಗುವು ನಗುವಲ್ಲು ಹಾಡು
ಇದಾವ ಬಗೆಯ ವಿಭವ ?
ಮನದೊಳಗೆ ನಿಂತು ಪಟವಾಗಿ ಮೆರೆವ
ಬಯಕೆಯಲಿ ಪ್ರೇಮ ಜನ್ಯ
ಎದೆಯೊಲವು ಹರಿದು ಭಾವನೆಯ ಬಣ್ಣ
ತುಂಬಿರಲು ಬದುಕು ಧನ್ಯ

ಕನಸೆಲ್ಲ ಹೊರಗೆ ಬರಲಿ
ಉಸಿರಲ್ಲಿ ಬೆರೆತು ಹಾಡಾಗಿ ಇರುವ
ಮಾತೆಲ್ಲ ಬಿರಿದು ನಗಲಿ
ನೀಡುವುದು ಪ್ರೀತಿ , ಪಡೆಯುವುದು ಅಲ್ಲ
ನಾನೆಲ್ಲ ಕೊಟ್ಟೆ ನಿನಗೆ
ಹಿಂತಿರುಗಿ ಕೊಟ್ಟು ಋಣಮುಕ್ತಳಾಗೆ
ನಾ ಕೊಟ್ಟ ಪ್ರೀತಿ ನನಗೆ !!
೨೦೦೫
5 comments:
ಉಸಿರಲ್ಲಿ ಬೆರೆತು ಹಾಡಾಗಿ ಇರುವ
ಮಾತೆಲ್ಲ ಬಿರಿದು ನಗಲಿ
nice lines.. keep it up
Wah! You have that grip over metre and alliteration I so much love. That and the meaning really make for a poem. The rest are to fill space. Thank you.
ನೀಡುವುದು ಪ್ರೀತಿ , ಪಡೆಯುವುದು ಅಲ್ಲ
ನಾನೆಲ್ಲ ಕೊಟ್ಟೆ ನಿನಗೆ ....vaaa .ee salu thumba khushi athu ...heenge baravadara munduvarisu...ninna kalpaneyellavu aksharali mudali....edu athigeya harike.......
ನೀಡುವುದು ಪ್ರೀತಿ , ಪಡೆಯುವುದು ಅಲ್ಲ...
ಅಂತ ಹೇಳಿ ಕೊನೆಯಲ್ಲಿ....
ಪ್ರೀತಿಯನ್ನು ಹಿಂತಿರುಗಿ ಬಯಸುವುದು...
ಇದರ ಭಾವಾರ್ಥವೇನು.... ?
ನೀಡುವುದೇ ಪ್ರೀತಿಯಾದಮೇಲೆ ಮತ್ಯಾಕೆ ಪಡೆಯುವುದರ ಆಸೆ.... :)
ಚೆನ್ನಾಗಿದ್ದು ಕಿಣ್ಣಣ್ಣ.. ತುಂಬಾ ಇಷ್ಟ ಆತು.. :)
Post a Comment