Wednesday, December 22, 2010

ಮೂರು ಲೋಕ !!!


೧. ಸುಳಿವ ಗಾಳಿ ಹೂಗಂಧ ಒಳ ಹೊರಗೆ
ಹಿಮಪಾತ ; ಎಳೆ ಬಿಸಿಲ ಕೊಡೆಯಾಸೆ.
ರುದ್ರಾಕ್ಷಿ ನೋಟ ಹದ್ದಿನ ಬೇಟೆ !
ಹೆಸರಿಡದ ಚಿತ್ರ ವಿಚಿತ್ರ ಆಕೃತಿ
ಬಹುಮುಖ ಪ್ರತಿಬೆ ಸಂತಾನ, ಹರಿದು ಹೋಗುವ ಭಾವ
ಅಂಬೆಗಾಲಿಟ್ಟು ನಡೆಯುವ ಮಗು .
೨.
ಸುತ್ತುವ ಗಾಳಿ , ಬಯಕೆ ಹೂ ಬಿಸಿಯೆದೆಗೆ
ಅರೆಗಟ್ಟಿದ ನೀರು, ಮೊಸರು; ಗೋಸುಂಬೆ 
ಬಾನ ನೀಲಿಯ ದೃಷ್ಟಿ , ಶೂನ್ಯದ ಕಾಟ  
ದೀರ್ಘ ಉಸಿರೆಳೆತದ ಹರಿವು 
ಹೆಸರಿಟ್ಟ ಭೂತದ ಮೂರ್ತಿ ; ಮುಖವಾಡ 
ಹೊರಳಿ ಮಿಡುಕುವ ತರುಣ .
೩.
ಒಡೆದ ದೀಪದ ಬಳಿ ಸುತ್ತುವ ಗಾಳಿ
ಮುಗಿದೂ ಮುಗಿಯದ ಎಣ್ಣೆ
ಆವಿ; ನಿಲ್ಲುವ ಮೋಡದ ಕನಸು
ಸಾರ್ಥಕ ನಿರರ್ಥಕ ನಿಚ್ಚಣಿಕೆಯ ಸಾಕಾರ
ನೂರು ಗೂಡಿನ ಹಕ್ಕಿ ಗರಿ ಉದುರಿ ಶೂನ್ಯ.
ಆಕಾಶದಾಚೆಯ ದೃಷ್ಟಿ ಹೊರಳುವ ಬಿಂಬ
ತೆರೆದ ಅವಕಾಶ ಕಾಯುವ ವೃಧ್ಧ.

ISHWARA BHAT K
೦೪.೦೨.೨೦೦೫ 

3 comments:

ರವಿ ಮೂರ್ನಾಡು said...

ಮನುಷ್ಯನ ಉಗಮ ಮತ್ತು ಮೂರು ಹಂತಗಳ ಬದುಕಿನ ವೃತ್ತಾಂತ ಕಾವ್ಯವನ್ನು ಮೇರುಸ್ತರಕ್ಕೇರಿಸಿದೆ ಗೌರವಾನ್ವಿತ ಈಶ್ವರ ಕಿರಣರೆ. ಇದು ಕಾವ್ಯ ಮಾತ್ರವಲ್ಲ ಓದಿ ಅದರಾಳಕ್ಕಿಳಿಯುವ ಎಲ್ಲರದ್ದು.ಭಾವಗಳು ಗಟ್ಟಿಯಾಗಿದೆ.

ಈಶ್ವರ said...

ಧನ್ಯವಾದಗಳು ರವಿ ಸರ್ .

Unknown said...

ತುಂಬಾ ಚೆನ್ನಾಗಿದೆ