Friday, November 25, 2011

ನಾನು ಮತ್ತ ಅವಳು ಎತ್ತ?


ಬಾರೆ ಸಖಿ ಬಾರೆ ಸಖಿ ನೀನು ಬಾರೆ ಇಲ್ಲಿ
ತೇರಿಹುದು ಎದೆಯಲ್ಲಿ, ದೇವಿಯಿರದೂರಿನಲ್ಲಿ

ಮುಡಿದದ್ದು ಮಲ್ಲಿಗೆ ಮಾತೆಷ್ಟು ಕಡೆಯಲ್ಲಿ
ಪರಿಮಳವು ಹೋದ ಕಡೆ ಗಾಳಿಯಲ್ಲಿ
ಎನಿತು ಮುದವಿತ್ತು ಎಷ್ಟೊಂದು ಸೊಬಗಿತ್ತು
ನಲ್ಲೆ ನೀನಿರುವಾಗ ಬಾಳಿನಲ್ಲೆ

ತೋರಿ ನೀ ಚಂದ್ರಮ ನಾ ನೋಡಿ ನಿಂದಾಗ
ಕಂಡ ಚಂದಿರ ನಿನ್ನ ಕಂಗಳಲ್ಲಿ
ದೂರ ಸರಿದರು ಅವನ ಕಿರಣಗಳು ಮೀಟುವವು
ನಿನ್ನ ಮೋಹದ ನಗೆಯ ಬಿಗುವಿನಲ್ಲಿ

ಬಳಲಿಕೆಯೋ ಬಾಡುವುದೋ ಮತ್ತೆ ಅಳು ನೋವುಗಳೊ
ಸುಖದ ಸುದೀಪ್ತಿಗಳೊ ಈಗ ಇಲ್ಲಿ?
ಕಳೆಯುತಿದೆ ನೆನಪು ಎಳೆಯುವುದು ನಿನ್ನ ಬಳಿ
ಚಕಿತ ನಿನ್ನೀ ಬಗೆಯ ಮೋಡಿಯಲ್ಲಿ!

25-11-11

8 comments:

Badarinath Palavalli said...

"ಕಳೆಯುತಿದೆ ನೆನಪು ಎಳೆಯುವುದು ನಿನ್ನ ಬಳಿ
ಚಕಿತ ನಿನ್ನೀ ಬಗೆಯ ಮೋಡಿಯಲ್ಲಿ!"

ವಾರೆವ್ಹಾ!

ಒಳ್ಳೆಯ ಸಖಿ ಗೀತ, ಮುದ ನೀಡಿತು. ನಿಮಗೂ ಒಳ್ಳೆಯ ಸಖಿ ಸಿಗಲಿ ಎಂದು ಆ ರತಿ ಮನ್ಮಥರಲ್ಲಿ ಬೇಡಿಕೊಳ್ಳುತ್ತೇನೆ!

Harisha - ಹರೀಶ said...

ಯಾರಾಕೆ? :-)

Dr.D.T.Krishna Murthy. said...

ಸುಂದರ ಪ್ರೇಮ ಕವನ.ಅಭಿನಂದನೆಗಳು.

ಮೌನರಾಗ said...

chandada kavana..
nice..

ರವಿ ಮೂರ್ನಾಡು said...

ನೆನಪಿನ ಬುತ್ತಿಯಲಿ ಮಲ್ಲಿಗೆಯ ಪರಿಮಳದ ಸೊಗಸಿದೆ ನಿಮ್ಮ ಕವಿತೆಯಲ್ಲಿ.ದೇವಿ ಇರದ ಊರಿನಲ್ಲಿ ಅನ್ನುವಾಗ ಒಂದು ಗೈರು ಹಾಜರಿಯ ನೆನಪು ಬಂತು. ಚೆನ್ನಾಗಿದೆ ಲಯಬದ್ದ ಕವಿತೆ.

ಗಿರೀಶ್.ಎಸ್ said...

Chennagide.....

prashasti said...

ಚೆನ್ನಾಗಿದೆ ಕಿರಣಣ್ಣ :-) ಯಾರಾಕೆ ?

VidyaShankar Harapanahalli said...

ಚಂದ ಇದೆ!