Tuesday, December 27, 2011

ಚಂದ್ರ ಶಿಕಾರಿ .ನಾನು ಚಂದಿರ ಮತ್ತೆ ಅವಳು
ಅವಳೆಂದರೆ ನನ್ನದೇ ನೆರಳು !!

ನಾನು ಕಿರಣಗಳನ್ನ ತಡೆಯುತ್ತೇನೆ
ಚೆಂದುಟಿ ಒಣಗದಂತೆ
ಅವಳು ಕಿರಣಗಳನ್ನ ಸೆಳೆಯುತ್ತಾಳೆ
ಚಂದಿರನೂ ಕರಗುವಂತೆ

ಇಂದಾದರೂ ಪೂರ್ಣ ಚಂದಿರನ
ಕಾಣಬೇಕೆಂಬ ಬಯಕೆ!
ಅವಳ ಮುಂಗುರುಳಿನಲ್ಲೇ ಸಿಲುಕಿ
ಚಂದಿರ ಒದ್ದಾಡುವನೇನೋ ?
೪.
ಎಲ್ಲರೂ ಅಂದರು ಚಂದಿರ
ಇದ್ದಾಗ ರಾತ್ರಿ ತಂಪೆಂದು.
ಹೆಮ್ಮೆ ನನ್ನಲ್ಲಿ ! ನನಗೆ
ಚಂದಿರ ಬೆಚ್ಚನೆಯ ಆಶ್ವಾಸ !

೨೭-೧೨-೨೦೧೧

17 comments:

ನನ್ನೊಳಗಿನ ಕನಸು.... said...

ಅವಳ ಮುಂಗುರುಳಿನಲ್ಲೇ ಸಿಲುಕಿ
ಚಂದಿರ ಒದ್ದಾಡುವನೇನೋ ?.... nice

ಮೌನರಾಗ... said...

ಸುಂದರ ವರ್ಣನೆ...

ಗಿರೀಶ್.ಎಸ್ said...

ಅವಳು ಕಿರಣಗಳನ್ನು ಸೆಳೆಯುತ್ತಾಳೋ ಅಥವಾ ಕಿರಣನನ್ನು ಮಾತ್ರ ಸೆಳೆಯುತ್ತಾಳೋ ?...
Nice ones...

Harisha - ಹರೀಶ said...

ಒಳ್ಳೇ ಕಲ್ಪನೆಗಳು :-)

ಅನು. said...

ಕಿರಣದೊಳು ಚಂದಿರನೋ...ಚಂದಿರನೊಳು ಕಿರಣವೋ... ಅದ್ಭುತ ಕಲ್ಪನೆ..ಅರ್ಥಗರ್ಭಿತವಾದ ಕವನ...

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ಅಹ್ಹ.. ಈಶ್ವರ ಕಿರಣರು ಚೆಲ್ಲಿರುವರು..
ಮನದೊಳಗೆ ಸುಂದರ ಚಂದಿರ ಕಿರಣಗಳನ್ನು ..
ಚೆಂದದ ಕವನಗಳ ಸಾಲುಗಳಲ್ಲಿ ..
ಚೆಂದಿರನನ್ನು ಕಲ್ಪನೆಯಲ್ಲಿ ಬಂಧಿಸುತಲಿ..

ನಾನು ಚಂದಿರ ಮತ್ತೆ ಅವಳು
ಅವಳೆಂದರೆ ನನ್ನದೇ ನೆರಳು.....

ಇಲ್ಲಿ ನಾನು ಎನ್ನುವುದು ಸೂರ್ಯನು ..
ಚಂದಿರ ಮತ್ತು ಅವಳು ಎನ್ನುವುದು ಭೂಮಿಯು...
ಆಲ್ಲಿ ಬೀಳುವ ನೆರಳು ಸೂರ್ಯ ಗ್ರಹಣವೂ ಸಹ ಒಂದು ಕಲ್ಪನೆ...

ಎರಡನೇ ಕವನ ಕಲ್ಪನೆ..
ಸೂರ್ಯನು ಕಿರಣವನ್ನು ಕಾಲಕ್ಕೆ ತಕ್ಕಂತೆ ಕೊಡುತ್ತಾನೆ
ಅದರ ಶಾಖ ಮತ್ತು ಬೆಳಕು.. ಜೀವ ಸಂಕುಲಕ್ಕೆ ಬೇಕೇ ಬೇಕಾದ ಔಷದವಿದ್ದಂತೆ..
ಭೂಮಿಯು ಬೆಳಕನ್ನು ಬಯಸಿದಾಗ ಅಲ್ಲಿ ಹಗಲು ಸೂರ್ಯ ಕಿರಣಗಳು ಧರೆಗೆ ಧಾವಿಸಲು

ಮೂರನೇ ಕವನ ಕಲ್ಪನೆ..
ಸೂರ್ಯನಿಗೆ ಹಗಲು .. ಚಂದ್ರನಿಗೆ ಇರುಳು.. ಇಬ್ಬರೂ ಸಹ ಒಬ್ಬರೊನ್ನೊಬ್ಬರು
ನೋಡಲಾಗದ ಹಗಲು ಇರುಳು.. ಇರಲು ಇಲ್ಲಿ .. ಸೂರ್ಯನ ಆಸೆಯು ಚೆಂದಿರನನ್ನು ಕಾಣಲು
ಈಗ ಇಲ್ಲಿ ಕಲ್ಪನೆಯ ಒಳಗೆ ಒಂದು ಕಲ್ಪನೆ ..
ಇರುಳು ಕಪ್ಪು .. ಕಪ್ಪು ಕೆಶರಾಶಿಯು ಮುಂಗುರುಳ ಹೋಲಿಕೆಯಲ್ಲಿ .. ಚಂದಿರನು ಈ ಭೂಮಿಯ
ಸುತ್ತುವ ಒಂದು ಪ್ರೇಮಿಯು .. ಪ್ರೀತಿಯಲ್ಲಿ ಕಾಣದಾ ಮುಂಗುರುಳಿನಂತಹಾ ಇರುಳಿನಲ್ಲಿ.. ಅಲೆದಾಟದ
ಜೀವನ.. ಕಾರಣ ಪ್ರೀತಿಯನ್ನು ಮತ್ತು ಪ್ರೀತಿಯಲ್ಲಿ ಕುರುಡು ಎನ್ನುವ ಭಾವನೆಗಳ ವರ್ಣನೆ...
ಚಂದಿರ ಕಂಡರೂ ಸಹ ಬಲು ಸಣ್ಣವನು .. ಪೂರ್ಣವೆಂದು ಕಾಣುವನು ಎನ್ನುವ ಹಂಬಲ..

ಕೊನೆಯ ಮತ್ತು ನಾಲ್ಕನೆಯ ಸಾಲಿನ ಕಲ್ಪನೆ..
ಹುಣ್ಣಿಮೆಯ ಚಳಿಯನ್ನು ಕುರಿತಾದ ಮಾತುಗಳು.. ಎಲ್ಲರೂ ಹೇಳುವುದು ಹುಣ್ಣಿಮೆ ಚಂದಿರ ಬಲು ಸುಂದರ.
ಆಗ ಬರುವ ಬೆಳಕು ಮತ್ತು ಆ ಮೆತ್ತನೆಯ ಗಾಳಿಯ ಸ್ಪರ್ಶ ಇಲ್ಲಿ ರಾತ್ರಿಯ ತಂಪು ಮತ್ತು ತಂಗಾಳಿ..
ಸೂರ್ಯನೆಗೆ ಹೆಮ್ಮೆ ಇಲ್ಲಿ .. ಅವನು ಇಲ್ಲದ ಸಮಯದೊಳು ಕಾಯುವನು ಚಂದಿರನು ಭೂಮಿಯನ್ನು
ಅದೇ ಒಂದು ಮನಸ್ಸಿನ ಆಶ್ವಾಸನೆಯನ್ನು ಚಂದಿರನು ಸೂರ್ಯನಿಗೆ ಕೊಟ್ಟಿರುವನು.. ಇಲ್ಲಿ ಇಬ್ಬರು
ಪ್ರೇಮಿಗಳು ಭೂಮಿಗೆ .. ಒಬ್ಬರ ನಂತರ ಮತ್ತೊಬ್ಬರು ಕಾಯುತ್ತಿರುವರು ಅವಳನ್ನು...
ಸೂರ್ಯನು ಇಲ್ಲಿ ಪ್ರೇಮಿಯು ಪ್ರಾಣನಾಥನಾಗಿ .. ಚಂದಿರನು ಸಹ ಪ್ರೇಮಿಯು ಪ್ರಿಯಕರನಾಗಿ... :)

ಮೆಚ್ಚಿ ಓದುವ ಮನಸ್ಸಿನ ಓದುಗರೇ .. ಕವಿತೆಯ ಅರ್ಥವೂ ಬೇರೆಯೇ ಇದೆ.. ಆದರೆ ನಮ್ಮ ಕಲ್ಪನೆಯಲ್ಲಿ
ಈ ಕವನದ ಸಾಲುಗಳಿಗೆ ಅರ್ಥಗಳು ಅನೇಕ .. ವಿವಿಧ ಬಗೆಯ ದೃಷ್ಟಿಕೋನದಲ್ಲಿ ಆಲೋಚಿಸಿ ನೋಡಿದಾಗ..
ಒಟ್ಟಾರೆ ಮನಮೆಚ್ಚುವಂತಹಾ ಕವಿತೆ.. ಒಪ್ಪಿದೆವು ಕವಿಯ ಆಲೋಚನೆಯ.. ಸೊಗಸಾರ ರಚನೆ.. ಈಶ್ವರ್ .. ಸರ್.. :)

Badarinath Palavalli said...

ವಾವ್. ಎಂತ ಹೋಲಿಕೆ!

ಕಡೆ ಚರಣವು ಪೂರ್ಣ ಪಾಠಕ್ಕೆ ಪೂರ್ಣ ಚಂದಿರ.

ಅವಳು ನೆರಳು ಎನ್ನುವಲ್ಲೇ ಕವಿಯ ಚಾತುರ್ಯತೆ ಮೆರೆದಿದೆ. ಅವಳಿಗೇ ತಪ್ಪು ಒಪ್ಪುಗಳನ್ನು ಅರ್ಪಿಸುವ ಬುದ್ಧಿವಂತಿಕೆ ಇದೆ.

ಉತ್ತಮ ಸರಸಮಯ ಕವನ.

ರಾಘವೇಂದ್ರ ಜೋಶಿ said...

ನೀಟಾದ ಕವಿತೆ.ಚೆಂದ ಇದೆ.ಬರೆಯುತ್ತಿರಿ.
-RJ

ಚೆಂದುಳ್ಳಿ said...
This comment has been removed by the author.
ಚೆಂದುಳ್ಳಿ said...

ತುಂಬಾ ಚೆನ್ನಾಗಿದೆ... ಅಮವಾಸ್ಯೆಯ ರಾತ್ರಿಯಲ್ಲೂ ಹಾಲ್ಬೆಳದಿಂಗಳು ಇರುತ್ತದೆಂದೆಂದರೆ
ಅದು- ಇಂಥ ಕವಿತೆಗಳಿಂದಲೇ.

ಕಿರಣನ ಶಿಕಾರಿಮಾಡಿದ ಅವಳು-ಯಾರವಳು ಕಿಣ್ಣಾ ??

ಹರೀಶ್ ಶೆಟ್ಟಿ, ಶಿರ್ವ said...

ಚಂದವಾದ ಕವಿತೆ .......ನಿಮ್ಮ ಕಾವ್ಯ ಕಿರಣ ಹೀಗೆಯೇ ಹರಡುತ ಇರಿ.....

ಮನಸ್ವಿ said...

ಚನ್ನಾಗಿದೆ ಕವಿತೆ.. ಹೀಗೆ ಬರೆಯುತ್ತಿರಿ

savitha said...

ಕವಿತೆ ಚೆನ್ನಾಗಿದೆ.. ವರ್ಣನೆ super... ಕಿರಣನನ್ನು ಸೆಳೆದ ಚಂದ್ರಮುಖಿ ಅವಳಾರು???

Anonymous said...

I enjoy reading articles from your site. Keep on writing. sildenafil citrate

jayalaxmi said...

ಚೆಂದದ ಕವಿತೆ, ಸ್ವಲ್ಪ ತಡವಾಗಿ ನಿಮ್ಮ ಬ್ಲಾಗಿಗೆ ಭೇಟಿ ನೀಡಿದೆ.ಕೊನೆಯ ನುಡಿಯಂತೂ ಇನ್ನೂ ಚೆಂದ.

ಸೀತಾರಾಮ. ಕೆ. / SITARAM.K said...

ಚೆಂದದ ಕವಿತೆ..

prashasti said...

ಒಳ್ಳೆ ಕವನ ಕಿಣ್ಣಣ್ಣ :-)