Sunday, February 8, 2015

ಹೇಳಲೇನೇ ಸಖಿಯೇ..

ಹೇಳಲೇನೇ ಸಖಿಯೇ ಒಲವನು
ಹೇಳಲೇನೇ ಸಖಿಯೇ,

ಏನು ಹೇಳುವೆನೆಂದು ಕಾತರಗೊಂಡಿಲ್ಲ
ಹೇಳು ಎನುತ ನನ್ನ ಕಾಡುವುದಿಲ್ಲ
ಆತುರದಿಂದಲಿ ಹೇಳುವಾಸೆಗೆ ಬಂದೆ
ಕೇಳುವ ಕಿವಿಗಳು ಹತ್ತಿರ ಬಂದಿಲ್ಲ.

ಕೇಳುವಾಸೆಗೆ ನೀನು ಕಿವಿಯ ಹತ್ತಿರ ತರಲು
ನಿನ್ನೆಯ ತೆರದಂತೆ ಕಚ್ಚುವುದಿಲ್ಲ;
ಯಾರದೋ ಕತೆಹೇಳಿ ಯಾವುದೋ ಗೋಳುಗಳ
ಮುನಿಸು ಮಾತುಗಳಿಂದ ಚುಚ್ಚುವುದಿಲ್ಲ

ಎಷ್ಟಾದರೂ ದೂರ ಇರಬಾರದು ನೀನು
ಪಿಸುಮಾತು ಬಲುದೂರ ತಲುಪುವುದೇ?
ಹೇಳಲೇನೇ ನಿನಗೆ ಎನುವ ಮಾತುಗಳಲ್ಲಿ
ನನ್ನ ಪ್ರೀತಿಯ ಮಾತು ಕಾಣಿಸದೇ?

2 comments:

Badarinath Palavalli said...

ಮಾತುಗಳು ಹೇಗಿರಬೇಕು ಮತ್ತವು ಒಲುಮೆಯನು ಹೇಗೆ ಇಮ್ಮಡಿಗೊಳಿಸಬೇಕು ಎಂಬುದಕ್ಕಿಲ್ಲಿ ಕೆಲ tipsಊ...

sunaath said...

ಸಖಿಯನ್ನು ಓಲೈಸುವ ಈ ಕವನದ ಭಾವವು, ನಮ್ಮಲ್ಲೂ ಸಹ ಭಾವತರಂಗಳನ್ನು ಹುಟ್ಟಿಸುತ್ತದೆ. ಇದೇ ಕಾವ್ಯಸಿದ್ಧಿಯ ರುಜುವಾತು!