Thursday, February 3, 2011

ಬಾಲಿಶ ಕವನಗಳು !! 23 ಮೊದಲ ನೋಟಕೆ !!

ಮೊದಲ ನೋಟಕೆ ಯಾವ ಭಾವವೋ
ಸುಳಿಯಿತೇನೋ ಮನಸಲಿ
ಒಡಲ ಮಾತನು ಬಯಸಿ ಹೇಳಿದೆ
ಪಡೆದೆ ಏನೋ ನೆನಪಲಿ

ಬರಿಯ ಆಸೆಗೆ ಹಗಲು ಕನಸಿಗೆ
ಗೆಲುವೆ ಹೊಸಕಿತೆ ನಗೆಯನು ?
ಕಳೆದೆ ಏತಕೆ ಪ್ರೀತಿ ಮಾತನು ?
ಒಲವೆ ಇರಿಯಿತೆ ನನ್ನನು?

ನೂರು ನೋವಿನ ಎಲ್ಲೆಯಾಚೆಗೆ
ಎಲ್ಲೋ ನಲಿವಿನ ನಗುವಿದೆ
ಮುನಿಸು ವಿರಸದ ತೋಟದಲ್ಲಿಯೇ
ಹೊಸತು ಪ್ರೇಮದ ಗಿಡವಿದೆ

ಹಾರೋ ಚಿಟ್ಟೆಯೇ ಏರು ಮೇಲಕೆ
ಹೂವ ತೊರೆ ಹಳೆ ನೆನಪನು
ಮೇಲೆ ಕಾಣುವ ತಾರೆಯೊಲುಮೆ
ಗಳಿಸು ;ಪ್ರೀತಿಯ ಬಾಳನು .


29/01/2005 

3 comments:

gkbhat said...

arthapurnavada kavana.........

Ranjita said...

Nice one ..ಹೀಗೆ ನಿಮ್ಮ ಬತ್ತಳಿಕೆಯಿಂದ ಚಂದದ ಕವನಗಳು ಬರ್ತಾ ಇರಲಿ. :)

IBK said...

ಧನ್ಯವಾದಗಳು :)

ಬತ್ತಳಿಕೆ ಹೇಳಿದ್ದು ತುಂಬ ಕುಶಿ ಯಾಕಂದ್ರೆ ಈಗ ಸಂಪಾದನೆ ಕಡಿಮೇನೆ .. ಎಲ್ಲ ಹಳೆದು :)