
ಅಲೆ ಅಲೆಯಾಗಿ ಹೊರತ ನೀರು
ಇನ್ನೊಂದಲೆಯ ಮುಟ್ಟಿ .. ಸುಮ್ಮನೆ
ವೃತ್ತಾಕಾರವಾಗಿ ..
ಆಹಾರ ಬಿತ್ತೆಂದು ಏಳುವ ಮೀನು
ಸಾಮಾನ್ಯವೆ೦ಬ೦ತಿರುವ ದೊಡ್ಡ ಮೀನು
ಮೇಲೆ ಬರುವ ಮೀನನ್ನೇ ಕಾಯುವ ನೀರೊಳ್ಳೆ
ಮತ್ತೆ ಆ ಕಲ್ಲಿಗೆ ಕೃತಜ್ಞತೆಯ ನೋಟ
ಕೊನೆಯ ಮುಟ್ಟಿದ ಕಲ್ಲು
ಕೆರೆಯ ನೀಲಿಯ ಸ್ವಲ್ಪ ಕೆಸರಾಗಿಸಿ
ತಳದಲ್ಲಿಯೇ ಭದ್ರ
ಕೆಸರೋ ಅಲ್ಲಲ್ಲಿಯೇ ಚದುರಿ ಸ್ಥಳಾಂತರ
ನೋಡುಗರಿಗೆ ಕೆರೆ ಹಾಗೆಯೇ
ಶಾಂತ ,ಸಮಾಧಾನಿ

ಆಹಾರ ಹುಡುಕುವ ಮೀನು
ಮೀನು ಕಾಯುವ ಹಾವು
ಸ್ಥಳಾಂತರ ಬಯಸುವ ಕೆಸರು
ಕಾಯುವುದು
ಇನ್ನೊಂದು ಕಲ್ಲಿಗೆ !!
04/10/2004
2 comments:
ತುಂಬಾ ಚನ್ನಾಗಿದೆ. ಆದ್ರೆ ಇತ್ತಿಚಿನ ದಿನಗಳಲ್ಲಿ ಕೆರೆಗಳು ಮಾಯವಾಗ್ತ ಇದೆ. ಆದ್ರು ನಿಮ್ಮ ಕಲ್ಪನೆಗೊಸ್ಕರನಾದ್ರು ಮಾಯದ ಹಾದಿಲಿರೋ ಕೆರೆಗಳಾದ್ರು ಉಳಿಯಲಿ.
Really Good....
Post a Comment