ನಾನು ನೀರಿಗಿಳಿದರೆ ಸರಿಯಾಗಿ ಈಜಾಡಬೇಕು
ಪಿಚಕ್ಕನೆ ಚಿಮ್ಮುವ ಕೆಸರ ಹರಿಸುವ ನೀರಲ್ಲ
ಸೊಂಟದ ವರೆಗೆ ಬಂದು ಹಣಕಿಸುವ ನೀರೂ ಅಲ್ಲ
ನಾಭಿಯ ಮೇಲಿಂದ ಸುಳಿ ಹಾರುವ
ಅಂಗಾತ ಮಲಗಿ ನೀಲ ಬಾನು ತೆರೆವ
ತೆರದಲಿ, ಕಂಠದ ವರೆಗೂ ಇರಲಿ ನಾನೂ ಈಜಬಲ್ಲೆ ಎನ್ನುವ ಅಭಿಮಾನ ಉಕ್ಕಿಸಿ
ಏನನ್ನೋ ದಕ್ಕಿಸುವ ನೀರು ಬೇಕು
ಮತ್ತೆ,
ನಾನೆ ನೀರನು ಎರೆದು ಆಟ ಆಡುವುದಲ್ಲ
ಆ ನೀರ ನೀರೆಯೊಳು ನಾ ಮುಳುಗಬೇಕು.
1 comment:
ಕೃತಿಯ ಸಾರ್ಥಕ್ಯ ಸಾಧಿಸಬೇಕೆನ್ನುವ ನನ್ನಂತಹ ಬಾಲ ಕಲಾವಿದರಿಗೆ ಕಿವಿ ಮಾತಿನಂತಹ ಕವನವಿದು ಈಶ್ವರಣ್ಣ!
Post a Comment