ನೀರಾಟಕಿಳಿದೆ ನಾ ನೀರೆಯರಾ ಸೊಬಗಿನ
ದಾರಿ ನೀ ತೋರಿದೆಯ ಮಾರ್ಮಲೆವ ಮಡುವಿನೊಳು
ಹೆಸರಾಟ ಬರಿ ಕೆಸರ ಪಾಚಿಗಟ್ಟಿದ ಬಣ್ಣ
ಉಸಿರ ಬದುಕಿಸೊ ಆಟ ಅವಳಿಗೋ ಅವನಿಗೋ

ಆ ನೀರು ನೀಲಿಯದಂತೆ, ಬಾನು ನೀಲಿಯದಂತೆ
ಅಣಕಿಸುವ ಕಣ್ಣಾಲಿ ! ಎಲ್ಲ ಕಪ್ಪಿನ ಮೇಲ್ಮೆ
ಒಳಗೆ ಎದೆ ಬೆಳ್ಳಿಯದು , ಕಟ್ಟು ಚಿನ್ನದ್ದಂತೆ
ತೊಳೆದು ಹೋಗುವುದಿಲ್ಲ, ತಳೆದರದು ಕರಗದು
ಸುಳಿವು ಮರಣದ ಕಪ್ಪು, ಜನನ ಬಿಳುಪೇ ?
೧೧.೦೭.೨೦೧೧
1 comment:
ಭಾವನೆಗಳ ಆಲೋಚನೆಯಲ್ಲಿ ಕಟ್ಟಿಹಾಕುವ ಗಟ್ಟಿತನ.. :)
ಅರ್ಥಕ್ಕೆ ಹತ್ತಿರ ಬಂದು ದೂರ ಸರಿಯುವ ಕಲ್ಪನೆಯ ಮಾಯಾಜಾಲ ನಿಮ್ಮ ಪದ ಪ್ರಯೋಗಗಳಲ್ಲಿ .. ಏನೆಂದು ಉತ್ತರಿಸಬೇಕು ಓದಿದಾಗ ಅನ್ನುವ ಗೊಂದಲ .. ಈ ಕವಿತೆಯ ಮಾಯೆಯೂ ಹಾಗೆಯೇ.. ಜೀವನವನ್ನು ದಿಕ್ಕುಗಳ ಬದಲಿಸಿ ನೋಡಿದಾಗ ಸಿಗುವ ಪ್ರಶ್ನೆಯಂತೆ .. ಮತ್ತು ಕೊನೆಯಲ್ಲಿ ಕೊಟ್ಟ ಪ್ರಶ್ನೆಯ ಕಲ್ಪನೆಯೇ ತಿಳಿಯುತ್ತಿಲ್ಲ.. ಆದರೂ ರಚನೆಯಲ್ಲಿ ವಿಶಿಷ್ಟ ಸೊಗಸು.. ಹಲವು ಭಾವನೆಯ ದೃಷ್ಟಿಕೋನದಲ್ಲಿ ಚಿಂತಿಸಿ ಓದುವಂತೆ ಮಾಡುತ್ತದೆ.. ಮೆಚ್ಚಿದೆವು ನಿಮ್ಮ ಲೇಖನಿಯ ಜಾದೂವನ್ನು.. :)
Post a Comment