Tuesday, February 7, 2012

ನನ್ನ ನಿಲುವು.


ಕೆಲವೊಮ್ಮೆ ಹಾಗೆಯೇ
ಚಡ್ಡಿಯೊಳಗೆ ನಾನೇ ಸಿಲುಕಿದಂತೆ !
ಬೇರೆಯವರು ಕಾಣದಂತೆ
ಸ್ವಲ್ಪವೇ ತೋರುವಂತೆ
ಕುತೂಹಲ ಕಣ್ಣಲ್ಲೇ ಇರುವಂತೆ
ಕಾಯ್ದುಕೊಂಡಿದ್ದೇನೆ !

ಆಗಾಗ ಗೋಡೆ ಹಾರುವಾಗ
ಜಾತ್ರೆಬೀದಿಗಳಲ್ಲಿ ತಿರುಗುವಾಗ
ಆಕಸ್ಮಿಕವಾಗಿ ಚಡ್ಡಿಯ
ಬಿಗುವು ಸಡಿಲಿದಂತೆ !
ಆದರೂ , ಬೀಳದಂತೆ
..ನೋಡಿಕೊಂಡಿದ್ದೇನೆ !

ಸಿಟ್ಟು ಬರುವುದು ನೀವೆಳೆಯುವಾಗ ಸ್ವಾಮಿ !
ಕಾಣದ ಕೈಯ್ಯೇನಲ್ಲ ನಿಮ್ಮದ್ದು !
ಗೊತ್ತು, ನಿಮಗಾಗುವುದಿಲ್ಲವಿದು
ಆದರೂ ಎಳೆಯುತ್ತೀರಿ !
ನಾನೂ ಹಾಗೆಯೇ,

ಯಾಕೆಂದರೆ
ಹಿಡಿದುಕೊಳ್ಳುವುದರಿಂದ
ಎಳೆಯುವುದು ಸುಲಭ !!

8 comments:

Gagana Chukki said...

ಕಿರಣ... ಕವನ ಚೆನ್ನಾಗಿದೆ.. ಯಾವುದಾದರೂ ಪತ್ರಿಕೆಯಲ್ಲಿ ನಿನ್ನ ಕವನಗಳನ್ನು ಹಾಕುವ ಪ್ರಯತ್ನ ಮಾಡು

sunaath said...

ಭಾವನೆಯನ್ನು, ನಿಲುವನ್ನು ಪ್ರತೀಕಗಳ ಮೂಲಕ ಕವನಿಸುವದು ಸರಳವೇನಲ್ಲ. ಈ ಕಾರ್ಯವನ್ನು ನೀವು ಚೆನ್ನಾಗಿ ಸಾಧಿಸಿದ್ದೀರಿ.ಸುಂದರವಾದ ಕವನಕ್ಕೆ ಅಭಿನಂದನೆಗಳು.

Badarinath Palavalli said...

ಅಮೂರ್ತವಾಗಿ ಝಾಡಿಸೋ ಕವನ.
ಇದು ರಾಜಕೀಯ ಪಕ್ಷಗಳಿಗೂ ಅನ್ವಯವಾಗುತ್ತೆ ಅಲ್ವೇ ಭಟ್ರೇ!

Shashi jois said...

ಕಿರಣ ಚಡ್ಡಿ ಜಾಗ್ರತೆ ಮಾರಾಯ.....
ಹ ಹ ಹ ಚಡ್ಡಿ ಹಿಸ್ಟರಿ ಚೆನ್ನಾಗಿದೆ ಕಣೋ...

ಸೀತಾರಾಮ. ಕೆ. / SITARAM.K said...

ಬಿಚ್ಚುವದಿಲ್ಲವೆಂದಿದ್ದರು ಅದರ ಸುತ್ತವೆ ನಮ್ಮ ಲಕ್ಷ !
ಒಳಗಿನದನ್ನು ಬಚ್ಚಿಟ್ಟುಕೊಳ್ಳುವ ಹುನ್ನಾರ ತವಕ.
ಅದ್ಭುತ ಪ್ರತಿಮೆಗಳನ್ನು ಬಳಸಿದ್ದಿರಾ...

ರಾಘವೇಂದ್ರ ಜೋಶಿ said...

ಹಹಹ..ಭಟ್ರೇ, ಮಸ್ತಾಗಿದೆ ಎಲ್ಲ ರೀತಿಯಿಂದಲೂ! :-)

ರಾಘವೇಂದ್ರ ಹೆಗಡೆ ರಾಘವೇಂದ್ರ ಹೆಗಡೆ said...

'ನಿಲುವು' ಸಕ್ಕತ್ತಾಗಿದೆ ಸರ್ ! :)

ಅನು. said...

ವಾಸ್ತವ ಕಟು ಸತ್ಯವನ್ನು ಕವನದ ಮೂಲಕ ಹೇಳುವುದೂ ಒಂದು ಕಲೆ...! ಚೆನ್ನಾಗಿ ಬರದ್ದೆ....!!