Saturday, February 7, 2015

ನಾಕ-ನರಕ

ಸ್ವರ್ಗಲೋಕದ ಸಂಜೆ ಕೈಯ್ಯಲ್ಲಿ ಮಧುಪಾತ್ರೆ
ನಾನೊಬ್ಬ ನರಕದವ, ದಣಿದು ಬಂದೆ.
ಹಾಡುತಿಹ ನಲಿಯುತಿಹ ಬೆಡಗ ಬೆಡಗಿಯರೊಡನೆ
ಒಂದು ಕ್ಷಣವಾದರೂ ಸುಖಿಸಲೆಂದೆ.

ನಡೆಯಬೇಕಿದೆ ಮುಂದೆ, ಅಲುಗಲಾರದು ಕಾಲು
ನನ್ನ ಹಿಡಿದಿಟ್ಟವರು ಯಾರು? ನೀನೇ?
ಕೈಯ್ಯ ಮಧುಪಾತ್ರೆಯೂ ತಲುಪಲಾರದು ಬಾಯ
ನನ್ನ ತುಟಿ ನನ್ನ ರುಚಿ ನನ್ನ ಬೇನೆ.

ಬಾಗಿಲನು ತೆರೆದರೂ ಮುಚ್ಚಿ ಮನಸಿನ ಕಿಟಕಿ
ತೊಲಗು ನೀನೆಂಬಂತೆ ನೋಡುವವರು!
ಸ್ವರ್ಗಲೋಕದ ಸಂಜೆ ಸ್ವರ್ಗಜನಕೇ ಇರಲಿ
ನರಕದವ ನಾನಂತು, ಕೆಡುವ ಜನರು.

ನಾಕದೇವರ ಮುಂದೆ ನರಕದಾಳಿಗೆ ಭ್ರಮೆಯು
ಚಾಚಬೇಕೋ ನಾಲ್ಗೆ, ಹಸಿದೊಡಲಿಗೆ
ಮುಷ್ಟಿಯನ್ನವನಿಕ್ಕಿ ಹೊಲಿದು ಬಿಡುವನು ಆಸೆ
ದೇವನೊಲುಮೆಯೆ ತಾನೆ ಕೊನೆಯು ನಮಗೆ

2 comments:

sunaath said...

ಬಹಳ ದಿನಗಳ ನಂತರ, ನಿಮ್ಮ ಕವನ ಹೊರ ಬಂದಿದೆ. ಆದರೆ, ಮಲ್ಲಿಗೆಯ ಸ್ವರ್ಗದಲ್ಲಿಯೇ ವಿಹರಿಸುತ್ತಿದ್ದ ಕವಿ ನರಕಭಾಜನನಾದದ್ದು ಹೇಗೆ?

Badarinath Palavalli said...

ನರಕ ಭಾಜನರಿಗೆ ದೇವನ ಒಲುಮೆಯೇ ನಾಸ್ತಿ! ಅದಕೇ ಹೀಗಿದೆ ನಮ್ಮ ಬದುಕು...