Saturday, June 6, 2015

ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು!

ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು ನೂರು ಸಾವಿರ ಕಣ್ಣು ಕೋಟೆಯೊಳಗೆ ಮನಸಿನಾಸರೆಗಾಯ್ತು ಬಹುಮಾನ ನೋವಿನಲಿ ಕಣ್ಣು ಕಿತ್ತಿತು ನೋಟ, ನಿನ್ನ ನುಡಿಗೆ. ನೀ ನುಡಿವ ಮೊದಲೇನೆ ಮಾತನಾಡಿದೆ ನಾನು ಮಾತು ಮುಗಿಯುವುದೆಂಬ ಧ್ಯಾನದಲ್ಲಿ ನಿನ್ನ ಮಾತನು ಕೇಳ್ವ ಕಿವಿಗೆ ಕರಗಿದ ಸೀಸ ನೋವು ನಂಬದೆ ಬಂತು ಪ್ರೀತಿಯಲ್ಲಿ. ಸೋತು ಹುಟ್ಟುವ ಪ್ರೀತಿ ಗೆಲುವ ಕಾಣಲೆ ಇಲ್ಲ ಮುಂದೆ ಕಾಣದೆ ಇರಲಿ ಗೋರಿಯಲ್ಲಿ ದೂರಸಾಗುವ ಮೊದಲು ದಾರಿಯಲಿ ಇಣುಕುವೆನು ನಿನ್ನ ನೆನಪಿದೆ ಗೆಳತಿ, ಮಲ್ಲಿಗೆಯಲಿ

1 comment:

sunaath said...

ಮಲ್ಲಿಗೆಯ ಕವಿ ಮಲ್ಲಿಗೆಯ ಕಂಪನ್ನು ಜೊತೆಗಿರಿಸಿಕೊಂಡೇ, ದೂರದಾರಿಯನು ಸವೆಸುವುದು ಅನಿವಾರ್ಯ!?