Monday, January 24, 2011

ಬಾಲಿಶ ಕವನಗಳು !! 20 ಮಾತು -ಮೌನ

ಮಾತಿನಿಂದೇನು? ಮೌನದಿಂದೇನು
ಮಾತು ಮೌನಗಳೆಲ್ಲ ನೆವವು ನಿನಗೆ
ಕಿರಣ ಮಾತಾಡುವುದೇ ಆ ಮಲ್ಲೆ ಹೂವಲ್ಲಿ ?
ಪ್ರೇಮ ಕರೆದಿಹುದೆನ್ನ ನಿನ್ನ ಬಳಿಗೆ !

ಮನಸೊಳಗೆ ಕನಸಾಗಿ ನೀ ಹರಿಯುತಿರುವಾಗ
ಮಾತೆಂಬ ನದಿಗಿಲ್ಲಿ ಬರಿ ಮೌನವೆ
ನಿನ್ನ ಪ್ರೇಮದ ಮಾತು ಕೇಳುವುದು ನನ್ನೆದೆಗೆ
ಮತ್ತದೇ ಮೌನದಲಿ ನಾ ಹೇಳುವೆ

ಆಗೊಮ್ಮೆ ಈಗೊಮ್ಮೆ ಮಾತು ಉರುಳಾಡಿತ್ತು
ಹಾರಿತ್ತು ಬಾನಕ್ಕಿ ಸಾಲು ಸಾಲೆ
ಹೊಸತು ಮೌನದ ಹಾಡ ನೀ ಮುಡಿಯುತಿರುವಾಗ
ಮುಂಗಾರು ಮೋಡಕ್ಕೆ ಬೆಳ್ಳಿ ಮಾಲೆ

ಮಾತು ಬರಿ ಮಾತಿಗೆ ;ಮೌನ ನಿಜ ಪ್ರೀತಿಗೆ
ಎರಡರಲಿ ನನಗಿಷ್ಟ  ನಿನ್ನ ಮೌನ
ನಿನ್ನಂತರಾಳದಲಿ ಎರಡಕ್ಕೂ ಅರ್ಥವಿದೆ
ಹುಣ್ಣಿಮೆಯ ಬೆಳಕಿನಲಿ ಹೊಳೆವ ಗಗನ !

ಮಾತಿರಲಿ ನಗೆಯಾಗಿ , ವಿರಸ ಮೌನದಲಿರಲಿ
ಅದರಾಚೆಗೆ ಎಲ್ಲ ನೋವು ಇರಲಿ
ಮಾತು -ಮೌನದಿಂದಲ್ಲ ಪ್ರೀತಿಯ ಸಾರ
ಸಮರಸದಿ ಈ ಬಾಳು ಎಂದು ನಗಲಿ


೦೧/೦೨/೨೦೦೫  

3 comments:

ಗಿರಿ said...

ಮಾತು ಬರಿ ಮಾತಿಗೆ ;ಮೌನ ನಿಜ ಪ್ರೀತಿಗೆ...
sundaravada bhava hanigaLa jodane...

preetiyinda
giri

Unknown said...

manamecchida kavana.....

ಮನಮುಕ್ತಾ said...

ಚೆ೦ದದ ಸಾಲುಗಳು..ಬರವಣಿಗೆ ನಡೆಯುತ್ತಿರಲಿ.


ನನ್ನ ಬ್ಲಾಗಿಗೆ ಬ೦ದು ನಿಮ್ಮ ಅನಿಸಿಕೆ ತಿಳಿಸಿದ್ದೀರಿ. ಧನ್ಯವಾದಗಳು.
ಕೆಮ್ಮಿನ ಉಪಷಮನ ಆಯ್ತು ಅ೦ದಿರಿ.. ಸ೦ತೋಷ..:)