Sunday, June 12, 2011

ಕೆಲವು ಲೈನುಗಳು, ಕವನವಾಗದೇ ಉಳಿದದ್ದು ..

ಸವಾಲು ಇಲ್ಲದ ಜೀವನ
ಟವೆಲ್ಲು ಇಲ್ಲದ ಸ್ನಾನ - ಎರಡೂ ಒಂದೇ ರೀತಿ ಅಲ್ವಾ?
 
ಸವಾಲು ಬರಿಸೋದು ಕಣ್ಣೀರು
ಟವೆಲು ಒರೆಸೋದು ತಣ್ಣೀರು
ರಾಮನಿಗೆ ವನವಾಸ ಎಂದರಿತ ಸೀತೆ ಹೋದಳವನ ಜೊತೆ ಕಾಡಿಗೆ
ಇವಳು ತವರು ಮನೆ ಸೇರಿದ್ದಾಳೆ , ಅವ ತರಲಿಲ್ಲ ಸೆಂಟು ಪೌಡರು ಮತ್ತೆ ಕಾಡಿಗೆ !!
ರಾಮ ನಾನಾಗಲಿಲ್ಲ, ಏಕೆಂದರೆ
ಕಾಡಿಂದ ಬರುವ ಮೊದಲೇ ಸೀತೆ
ನಾನು ಇನ್ನೊಬ್ಬಳಿಗೆ ಸೋತೆ !
ಪ್ರಿಯೆ , ಕೊಡುವೆಯಾ ಒಂದು ಮುತ್ತು
ಉಹುಂ.. ಎಷ್ಟಿದೆ ನಿನ್ನ ಬಳಿ ಸೊತ್ತು?
ಸೊತ್ತಿಲ್ಲ ನನ್ನಲ್ಲಿ, ತೋರು ನಿನ್ನಯ ಕತ್ತು
ತಾಳಿ ಕಟ್ಟುವುದಷ್ಟೆ ನನ್ನ ತಾಕತ್ತು !!
ಗೆಳತಿ ,
ಹೃದಯದ ನೋವು ದೊಡ್ಡದಾಗಿತ್ತು ನೀನು ಬಿಟ್ಟಾಗ
ಅದಕಿಂತ ನೋವಿದೆ,ಗೊತ್ತಾಗದೇ ಕಾಲುಗುರು ಕಿತ್ತಾಗ !!
ಹಿಂದೆ ಎಷ್ಟು ಸಲ ಅತ್ತಿದ್ದೆ ನಿನಗಾಗಿ ನೊಂದು
ಈಗಲೂ ಅಳುತಿರುವೆ ಈರುಳ್ಳಿ ಕೊರೆದು !!
ಬಂದ ಭಾವಕ್ಕೆ ಬಂಧನವಿಲ್ಲ, ಬಿಡುಗಡೆ !
ಎ೦ದವನು ಒಬ್ಬನ ಕೊ೦ದ
ಇ೦ದವನ ಬಿಡುಗಡೆ !!

2 comments:

ಜಲನಯನ said...

ಈಶ್ವರ್ ನಿಮ್ಮ ಧಾಟಿ ಚನ್ನಾಗಿದೆ, ಕವನವಾಗದ ಸಾಲುಗಳು ಹೇಗಾಯ್ತು ಕವನವಾಗದ ಸಾಲುಗಳು...??

ಈಶ್ವರ said...

ಥಾಂಕ್ಸ್ ಜಲನಯನ ಅವ್ರೆ.. ಹೀಗೆ ಕೆಲವು ಸಲ ದೊಡ್ಡ ಕವನ ಆಗಬೇಕಾದ ಸಬ್ಜೆಕ್ಟು ಸಣ್ಣಗೆ ಅದೇ ಅರ್ಥದಲ್ಲಿ ಬರೀ ಸಾಲುಗಳಾಗುತ್ತದೆ.. ಅದನ್ನೆ ಹೇಳಿದ್ದು.. ಬರುತ್ತಾ ಇರಿ.