Thursday, December 13, 2012

ಮಲ್ಲಿಗೆಯವಳು


ಮಲ್ಲಿಗೆಯ ತಂದವಳು, ಮಾತಿಂಗೆ ಸಿಕ್ಕವಳು
ಮರೆವ ನಟನವನಾಡಿ ಹೋದರೇನು?
ಹಿಂತಿರುಗಿ ನೋಡುತಲೆ ಕಿರುನಗೆಯ ಬೀರಿದಳು
ಕಣ್ಣುಗಳು ದೋಣಿಯಲಿ ಸಿಕ್ಕ ಮೀನು!

ನಡೆವ ದಾರಿಯ ಘಮಲು ಎಲ್ಲ ನಿಜ ನುಡಿದೀತು
ನೀ ಕೊಟ್ಟ, ನಾ ಪಡೆದ ಮಲ್ಲೆಗಳನು.
ತಲುಪಲಾರದೆ ಹೋದ ಸಂಭ್ರಮದ ಉತ್ತುಂಗ
ಕಟ್ಟಲಾರದೆ ಹೋದ ಮಾಲೆಗಳನು.

ಮಲ್ಲಿಗೆಯ ತಂದವಳು ಬಂದೆ ಬರುವಳು ನಾಳೆ
ಹೊಸಹೂವ ಮತ್ತೊಮ್ಮೆ ಬಿಡಿಸಬೇಕು
ನೀವಾದರೂ ಹೇಳಿ; ಮಲ್ಲೆ ಹೂವಿಲ್ಲದೆಯೆ
ಬಾಳುವುದು ಹೇಗೆಂದು ಕಲಿಸಬೇಕು.

೧೩-೧೨-೧೨
ಫೋಟೋ : ಗೂಗಲ್ ಮಹಾಶಯನದ್ದು.

8 comments:

ಸರಸ ಬಿಂದು said...

ಘಮಿಸಿ ಹೋದ ಮಲ್ಲಿಗೆ..ಬೇಗ ಬಾ ನಮ್ಮಲ್ಲಿಗೆ..!
ಜೀವ ಕೊಟ್ಟೆ ಈ ಕಲ್ಲಿಗೆ..ಏರ ಬಾರದೆ ಮೆಲ್ಲಗೆ..!!

ಕಿರಣ ನಿಮ್ಮ ಕವನ ಓದಿ ನನಗೆ ಈರೀತಿ ಬರೆಯಲಾಗುತ್ತಿಲ್ಲವಲ್ಲಾ..ಎಂದು ಅಸೂಯೆಯಾಗುತ್ತದೆ..

ಒಂದೊಂದು ಮಲ್ಲಿಗೆ ನಿಮಗೂ ನಮಗೂ ಸಿಕ್ಕಲಿ..ಶುಭವಾಗಲಿ..:)

Apoorva Udupi said...

yaaru aa mallige??
Hogu nee allige....


Badarinath Palavalli said...

ಒಳ್ಳೆ ಕವಿತೆ ಭಟ್ಟರೆ. ಮುಖ್ಯವಾಗಿ ಅದು ಕೆದಕುವ ನೆನಪುಗಳಿಗೆ.

ಮಲ್ಲೆ ಹೂವಿಲ್ಲದೆಯೋ ಒಲವು ದಕ್ಕಿಸಿಕೊಳ್ಳಬಹುದು, ಆದರೆ ಮಲ್ಲಿಗೆ ಘಮಲಲಿ ಕಟ್ಟುವ ಆ ಸಾಕ್ಷಾತ್ಕಾರದ ಕ್ಷಣ ಯಾಕೆ ಕಳೆದುಕೊಳ್ಳಬೇಕು?

ಮಲ್ಲಿಗೆ ಬೆಲೆ ಗಗನಕ್ಕೆ ಏರಲಿ ಆದರೆ ಮೊಳ ತರಲು ಜಿಪುಣತನ ಬರದೇ ಇರಲಿ.

sunaath said...

ನಿಮ್ಮ ಕವನವೇ ಒಂದು ಮಲ್ಲಿಗೆಯ ಮಾಲೆಯಾಗಿದೆ! (ಮುಡಿಯುವವಳು ಸಿಗದೆ ಇರುವಳೆ?)

ಕಾವ್ಯಾ ಕಾಶ್ಯಪ್ said...

masssst photo.... :) chendada saalu.. mallige bega tandu koda hange aagli ninge... :) ;)

ಮಂಜಿನ ಹನಿ said...

ಮೊಲ್ಲೆ ಮುಡಿದೇ ಬಿಡದೆ ಒಲಿವಳು
ಮಲ್ಲಿಗೆಯ ಮನದವಳು!
ಚೆಂದದ ಕವಿತೆ ಕಿರಣಣ್ಣ. ಪ್ರೇಮಕವಿತೆಗಳಲ್ಲಿನ ನಿನಾದಗಳನ್ನು ಗುರ್ತಿಸಲು ಉದಾಹರಣೆಗಳಾಗಿ ನಿಲ್ಲಬಲ್ಲವು ನಿಮ್ಮ ರಚನೆಗಳು. :)

Lakshmi said...

ಅಬ್ಬಬ್ಬಾ..... 👌👌👌👌

Lakshmi said...

ಈಗ ಆ ಮಲ್ಲಿಗೆ ನಿಮ್ಮ ಮುಡಿಯಲ್ಲಿದೆ😉